Search This Blog

Saturday, 24 July 2010

ಮನವಿ

ಅಲೆಮಾರಿ ಓದುಗ ! (ಕ್ಷಮೆ ಇರಲಿ )




ನಿಮ್ಮ ಅಲೆದಾಟ ಹುಡುಕಾಟಕ್ಕೆ ಕೊನೆಎಲ್ಲಿ ? ಇದು ನಿರಂತರ ನಿಮ್ಮ ಪ್ರತಿ ಕ್ಷಣಕ್ಕೂ ಬೆಲೆ ಇದೆ. ತಿಂಗಳಿಗೊಮ್ಮೆ ನನ್ನ ಪುಟ್ಟ ಗುಡಿಸಲಿನ ಜಗುಲಿಯ ಮೇಲೆ ಕುಳಿತು ನನ್ನ  ಗುಡಿಸಲನ್ನೊಮ್ಮೆ ಇಣುಕಿ,     ಉಸಿರು ಕಟ್ಟಿಸುವುದಿಲ್ಲವಾದರೆ ಸಂತೋಷ  ನೀವು ನನ್ನ ಗುಡಿಸಿಲ  ಹತ್ತಿರ ಬರುವುದೇ ಒಂದು ಆನಂದ ನಾನು ನಿಮಗೆ ಮೃಷ್ಟಾನ್ನ ಬಡಿಸಲು ಆಗದಿರಬಹುದು ಆದರೆ ಹಿಡಿ ಅವಲ್ಲಕ್ಕಿಯನ್ನು ಪ್ರೀತಿ ಇಂದ ಕೊಡಬಲ್ಲೆ. ನನ್ನ ನೆನಪು ಬಂದಾಗ ಒಮ್ಮೆ ಇತ್ತ ಬನ್ನಿ ನಾನು ಕಾಯುವೆ ನಾನಿಲ್ಲ ದಿದ್ದರು ನನ್ನ ಗುಡಿಸಲ ಜಗುಲಿಯಲ್ಲಿ ನೀವು ಕೂರಲು ಜಾಗವಿದೆ.



ಅವಲಕ್ಕಿ ಸಿಕ್ಕದಿದ್ದರೂ .............
    
                                              -jay

ನೀ ..... ?



ನೀ ..... ?

 ನಾನು  ನಿನ್ನ ಹಿಂದೆ

ನೀನು !? ನನ್ನ ಮುಂದೆ

ನೀನು ನನ್ನ ಕನಸು.

ನೀನು ನನ್ನ ಯಶಸ್ಸು.

ನೀನು ನನ್ನ ಸರ್ವಸ್ವ.

ನೀನು ನನ್ನ ಸಾರ್ಥಕತೆ.

ನೀನು ನನ್ನ ಬೆಳಕು .

 ನೀನು ತುಂಬಿರುವೆ ನನ್ನೊಳಗೆ.

ನೀನು ಅವರಿಸಿರುವೆ ನನ್ನನೇ.

ನೀನು ಇದ್ದರೆ ನಾನು.

ನಾನು ಅಂದರೆ ಅದು ನೀನೆ... !?

                                        -JAY

ನೀನು, ನಿನ್ನ, ನೀನೆ, ? (ಅಂದರೆ =ಪ್ರೀತಿ, ಪ್ರೇಮ, ಗುರಿ, ಬದುಕು, ಅವನು, ಅವಳು, ಸ್ಫೂರ್ತಿ, ಆರೋಗ್ಯ, ಸಂಪತ್ತು, ನಂಬಿಕೆ, ಆತ್ಮವಿಶ್ವಾಸ, ಛಲ, ಉತ್ಸಾಹ..... ಇರಬಹುದೇ)