Search This Blog

Wednesday, 17 September 2014

ದೇವರು ಮತ್ತು ನಾನು (ದೇವರ ಜೊತೆ ನಡೆದ ಸಂಭಾಷಣೆ)


ದೇವರು : ನಿಂಗೊಂದ್ ಕೆಲಸ ಕೊಡ್ತೀನಿ ಮಾಡ್ತಿಯ
ನಾನು  : ಆಯಿತು ಮಾಡ್ತೀನಿ
ದೇವರು : ಒಂದ್ ಷರತ್ತು
ನಾನು : ಹೇಳಿ
ದೇವರು : ನನ್ನ ಹತ್ತಿರ ಪ್ರೀತಿ ಇದೆ ಅದನ್ನ ನಿನಗೆ ಕೊಡುತ್ತೇನೆ ನೀನು ಎಲ್ಲರಿಗೂ ಹಂಚಬೇಕು ಯಾರಿಗೆ ಎಂದು ನೋಡಬಾರದು
ನಾನು : ಹಾಗೆ ಮಾಡಿದೆ
ಒಂದು ಸರಿ ಕುತೂಹಲಕ್ಕೆ ನಾನು ಯಾರ್ ಯಾರಿಗೆ ಪ್ರೀತಿ ಹಂಚಿದೆ ಅಂತ ನೋಡಿದೆ ತುಂಬಾ ನೋವಾಯಿತು ಕಣ್ಣಲ್ಲಿ ನಿರ್ ಬಂತು
ದೇವರು :ಯಾಕ ಅಳ್ತಾ ಇದ್ದೀಯ ಅಂತ ಕೇಳದ
ನಾನು : ನಾನು ಪ್ರೀತಿನ ಮೋಸಗಾರರಿಗೆ ವಂಚಕರಿಗೆ ಕೆಟ್ಟವರಿಗೂ ಹುಂಚಿದ್ದೆನೆ
ದೇವರು :ಅವರು ಅಂತವರು ಅಂತ ಹೇಗೆ ತಿಳಿಯಿತು
ನಾನು : ಮೌನ
ದೇವರು : ಪ್ರೀತಿ ನನ್ನದು ಅದನ್ನು ನಿನ್ನದು ಅಂತ ಹಂಚಿದೆ ಅದರಲ್ಲಿ ಮತ್ತು ಅವರಲ್ಲಿ ನೀನು  ನಿರೀಕ್ಷೆ ಹಾಗು ಅಪೇಕ್ಷೆ ಇಟ್ಟಿದ್ದರಿಂದ ತಾನೆ ನಿನಗೆ ಅವರು ಎಂತವರು ಅಂತ ಗೊತ್ತಾಗಿದ್ದು ನೀನು ನಿರೀಕ್ಷೆ ಇಲ್ಲದೆ ಹಂಚಿದ್ದರೆ ನಿನಗೆ ನೋವಾಗುತಿರಲಿಲ್ಲ ಅಲ್ಲವೇ
ನಾನು : ಹೌದು
ದೇವರು : ನಿನ್ನನು ಕೆಲಸ ದಿಂದ ತಗೆಯುತ್ತಿದ್ದೇನೆ
ನಾನು :ಕಾರಣ
ದೇವರು : ನನ್ನ ಪ್ರಿತಿಯನ್ನ ನಿನ್ನದು ಅಂತ ತಿಳಿದದ್ದು ನಿನ್ನ ತಪ್ಪು , ನಿನ್ನೊಳಗೆ ನಾನು ನನ್ನದು ಎಂಬ ಅಹಂಕಾರ ಮನೆ ಮಾಡಿತು ನಿರೀಕ್ಷೆ ಹುಟ್ಟಿತು ದುಕ್ಕ ಬಂದು ಸೇರಿತು,
ಪ್ರೀತಿ ಹಂಚಲು ನಿನ್ನನು ಹೇಗೆ ನೆಮಿಸಿದ್ದೇನೋ ಹಾಗೆ ನಿನ್ನಲ್ಲಿ ಪ್ರೀತಿ ಪಡೆಯಲು ಅವರನ್ನು ನೆಮಿಸಿದ್ದವನು ನಾನೆ ಅವರ ಕೆಲಸ ಅವರು ಮಾಡಿದರು ನಿನ್ನ ಕೆಲಸವನ್ನ ನೀನು ಮಾಡಲಿಲ್ಲ
ನಾನು : ಮುಂದೆ ಪ್ರೀತಿ ಹಂಚಲು ಸಾದ್ಯ ವಿಲ್ಲವೇ ನನಗೆ
ದೇವರು : ನಿನ್ನ ಪ್ರೀತಿಯನ್ನು ನಿನ್ನ ಬಳಿಯೇ ಇಟ್ಟಿದೇನೆ ಯಾರಿಗಾದರೂ ಹಂಚು ಯಾರಿಗೆ ಹಂಚ ಬೇಕು ಹೇಗೆ ಹಂಚ ಬೇಕು ನಿನಗೆ ಬಿಟ್ಟಿದ್ದು .....
ನನ್ನ ಪ್ರೀತಿ ನನ್ನ ಬಳಿಯೇ ಇದೆ ಹಂಚಲು ಭಯ ಕಾಡಿದೆ ಕಾರಣ ಎಲ್ಲಿ ಮೋಸ ಹೋಗುವೇನೋ ಎಂದು .......

Monday, 3 January 2011

ಹೊಸ ವರ್ಷದ ಶುಭಾಶಯಗಳು

Wednesday, 29 December 2010

ಒಂದಾಗುವ

ಭೂಮಿ ದುಂಡಗಿದೆ
ಮತ್ತೆ,
ಬೇಟಿಯಾಗುವ.....?
ಕಡೆಗೆ,
ಪಕ್ಕದ ಗೋರಿಯಲ್ಲಿ.......!
ಇಲ್ಲಾ,
ಒಂದಾಗುವ....ಬೂದಿಯಾಗಿ.....
ಪಶ್ಚಿಮ ವಾಹಿನಿಯ
ಕಾವೇರಿ ಮಡಿಲಿನಲ್ಲಿ .......
ನೀನು ಬೂದಿಯಾಗಿ ...
ನಾನು ಮಣ್ಣಾಗಿ ......
ಅಥವಾ!?
ನೀನು ಮಣ್ಣಾಗಿ ..........
ನಾನು ಬೂದಿಯಾಗಿ .....
ಪಂಚ ಬೂತ ಗಳಲ್ಲಿ ಲೀನವಾಗುವ.!
ಮತ್ತೆ ಬೇಟಿಯಾಗುವ ?


ಇನ್ನೆಲ್ಲೋ ?
ಇನ್ನ್ಯಾವ ರೂಪದಲ್ಲೋ ?
ಮತ್ತೆ ,
ಸೇರುವ ಭರವಸೆ ಯೊಂದಿಗೆ....?
ಇಂತಿ,
ನಿನ್ನ ಪ್ರೀತಿಯ
                  -ಜೆ

ನೀನು-ನಾನು

ಕಣ್ಣಿಗೆ ಚುಚ್ಚಿದ ಕಸದಂತೆ ನೀನು.
ನಗಲಾರೆ ಅಳಲಾರೆ,
ಸುಮ್ಮನೆ ನಗಬೇಕು.
ಮೌನವಾಗಿ ಅಳಬೇಕು.
ನಿನ್ನ ನೆನೆಯುವುದಿಲ್ಲ,
ಆದರೂ ಮರೆತಿಲ್ಲ.
ಸಿಕ್ಕರೂ ನೀನು,
ಹುಡುಕುವುದಿಲ್ಲ ನಾನು.

Wednesday, 17 November 2010

ತಿಳಿದ ಸತ್ಯ

ಕೊಳೆತ ಬೀಜವ ಯಾರು ಬಿತ್ತುವುದಿಲ್ಲ
ಅತ್ತದ ಕೂಳಿಗೆ ನೀರ ನೆರೆಯುವುದಿಲ್ಲ
ಸಂಪಾದನೆ ಇಲ್ಲದೆ ಸಾಲ ಹುಟ್ಟುವುದಿಲ್ಲ
ಸುಖ ವಿಲ್ಲದೆಡೆ ಯಾರು ಸೇರುವುದಿಲ್ಲ
ನಿನ್ನೊಳಗಿನ ಮುಗ್ಧತೆ ಹೊಟ್ಟೆ ತುಂಬಿಸುವುದಿಲ್ಲ
ನಿನ್ನಲಿ ಏನು ಇಲ್ಲದಿದ್ದರೆ ಜನ ಬರಿ ಮಾತನಾಡಿಸುವುದು ಇಲ್ಲಾ
ನೀನು ಸತ್ತಾಗ ಪಿಂಡ ಇಡುವುದಿಲ್ಲ
ಇಟ್ಟರು ಸಹ
ಆಗ ಕಾಗೆ ಗಳು ಬರುವುದಿಲ್ಲ...........

ನದಿ

ಕಾಣದ ಕಡಲಿನ ಒಡಲನು ಸೇರಲು
ನದಿಯು ಹರಿದಿದೆ ,
ಸೇರಲು ತೀರವ ದಾರಿಯ ಕಾಣದೆ
ಸುಮ್ಮನೆ ಹರಿದಿದೆ ,
ಕಾಣದ ಕಡಲನು ಸೇರುವ ತವಕದಿ
ದುಮ್ಮಿಕ್ಕಿ ಹರಿದಿದೆ ,
ಜುಳು ಜುಳು ನಾದವ ಮಾಡುತ ಹರ್ಷದಿ
ಬೋರ್ಗರೆಯುತ ಸಾಗಿದೆ,
ಕಾಡು-ಮೇಡು ಮಲೆಯ-ಮಾರುತ ಬಯಲಲಿ ಸಾಗಿದೆ
ಎಲ್ಲೂ ನಿಲ್ಲದೆ ,
ಕನಸಿನ ಕಡಲನು ಹುಡುಕುತ ಸಾಗಿದೆ
ಕಡಲಿನ ಒಡಲನು ಸೇರಲು ,
ಹರಿದ ದಾರಿಯ ತುಂಬೆಲ್ಲ ಭೂರಮೆಯ
ಹಸಿರು ಮಾಡಿದೆ
ಜೀವ ಸಂಕುಲಗಳಿಗೆ ಅಮ್ಬ್ರುತ ಉಣಿಸಿ
ಜೀವನ ನೀಡಿದೆ
ಬದುಕನು ನೀಡಿದೆ ಉಸಿರನು ನೀಡಿದೆ
ಕಡಲ ಓಡಲ ಸೇರುವ ತವಕದಿ
                                                               ಎಲ್ಲಿಯೂ ನಿಲ್ಲದೆ ನಿಂತ ನೀರಾಗದೆ

Thursday, 14 October 2010

ಗೊತ್ತಿಲ್ಲ

ನನ್ನ ಕೆಂಪಾದ ಕಣ್ಣುಗಳ ಕಂಡರೆ
ಮುಗ್ದ ಅನಕ್ಷರಸ್ತ ಅಮ್ಮನಿಗೋ ದಿಗಿಲು
ಅಪ್ಪನದು ಮೌನದಲಿ ದೀನ ನೋಟ
ತಮ್ಮಂದರಿಗೆ ದೈರ್ಯವಿಲ್ಲ ಪ್ರಶ್ನೆ ಮಾಡಲು
ತಂಗಿಯೋ ಹಟಕ್ಕೆ ಬಿದ್ದವಳಂತೆ
ಜಾಸುಸಿ ನಡೆಸುತ್ತಾಳೆ ಬುದ್ದಿವಂತಳಂತೆ
ಸ್ನೇಹಿತರೋ ರಾತ್ರಿ ನಿದ್ರೆ ಇಲ್ವಾ ಅಂತಾರೆ
ಇವರೊಳಗಿನ ಒಂದೇ ಪ್ರಶ್ನೆ
ಇವನ ಕಣ್ಣೇಕೆ ಕೆಂಪಗೆ
ಇವ ಕುಡಿತಾನ ಕುಡಿಯೋಕೆ ರೊಕ್ಕ ಎಲೈತ್ರಿ
ಇವ ಬಿಕಾರಿ ಅದಾನ
ಕಂಡಿಲ್ಲ ಕೇಳಿಲ್ಲ ಅನ್ನೋ ಸಮಜಾಯಿಸಿ
ನನಗೂ ಗೊತ್ತು ನನ್ನ ಕಣ್ಣು ಕೆಂಪಾಗಿವೆ
ಆದರು ರಕ್ತ ಸೋರುವುದಿಲ್ಲ
ನನ್ನೊಬ್ಬನಿಗೆ ಮಾತ್ರ ಗೊತ್ತು
ನನ್ನ ಕೈ ಗಳಿಗೆ ಗೊತ್ತು
ನನ್ನ ಕರವಸ್ತ್ರ ಗಳಿಗೆ ಗೊತ್ತು
ನನ್ನ ತೋಳು ಗಳಿಗೆ ಗೊತ್ತು
                                                            ಅವಳ ನೆನೆಸಿ ಕೊಂಡಾಗ 
                                                            ನನ್ನ ಕಣ್ಣುಗಳು ಕೆಂಪಾಗುತ್ತವೆ ಎಂದು
                                                                 ಕಣ್ಣ ರಪ್ಪೆಗಳಿಗೂ ಗೊತ್ತು
                                                                 ಇದು ಅವಳಿಗಾಗಲಿ, ನನ್ನವರಿಗಾಗಲಿ
                                                                 ಗೊತ್ತಿಲ್ಲ...............